ಪುಟಗಳು

ಭಾನುವಾರ, ನವೆಂಬರ್ 26, 2017

ಯಾವ ಸೋಪು ನಿಮ್ಮ ಮುಖಕ್ಕೆ ಬೇಕು ?

ಸೋಪುಗಳು


ಸೋಪುಗಳಲ್ಲಿ ಅನೇಕ ವಿಧಗಳಿವೆ. ಮುಖ ಹಾಗು ಮೈಗೆ ಬಳಸುವ ಸೋಪುಗಳನ್ನು ಮಾತ್ರ ಇಲ್ಲಿ, ನಾನು ವಿವರಿಸುತ್ತೇನೆ.
ಸೋಪಿನ ಅನೇಕ ಜಾಹಿರಾತುಗಳನ್ನು ನೀವು ನೋಡಿರಬಹುದು. ಆಮ್ಲಯುಕ್ತ(ಅಸಿಡಿಕ್) ಸೋಪನ್ನು ಮಾತ್ರ ಬಳಸಬೇಕೆಂದು ಒಬ್ಬರು ಹೇಳುತ್ತಾರೆ. ಕ್ಷಾರಯುಕ್ತ(ಬೇಸಿಕ್) ಸೋಪನ್ನು ಮಾತ್ರ ಬಳಸಬೇಕೆಂದು ಇನ್ನೊಬ್ಬರು ಹೇಳುತ್ತಾರೆ. ಇವೆರಡು ಇರದ (ನ್ಯೂಟ್ರಲ್) ಸೋಪನ್ನು ಮಾತ್ರ ಬಳಸಬೇಕೆಂದು ಮತ್ತೊಬ್ಬರು ಹೇಳುತ್ತಾರೆ.
ಹಾಗಾದರೆ, ನಾವೆನುಮಾಡಬೇಕು ಎನ್ನುವುದೇ ಅನೇಕರ ಸಮಸ್ಯೆ. ಇಲ್ಲಿ ನೀವು ಒಂದು ಮುಕ್ಯವಾದ ವಿಷಯವನ್ನು ತಿಳಿಯಬೇಕು.
"ಒಂದೇ ತರಹದ ಸೋಪು ಎಲ್ಲರಿಗೂ ಸೂಕ್ತವಲ್ಲ, ಹಾಗು ಒಬ್ಬರಿಗೆ ಚಳಿಗಾಲಕ್ಕೆ ಸರಿಹೊಂದುವ ಸೋಪು ಬೇಸಿಗೆಗೆ ಹೊಂದುವುದಿಲ್ಲ."
ಅದ್ದರಿಂದ ನಿಮ್ಮ ಮುಖಕ್ಕೆ ಯಾವ ಸೋಪನ್ನು ಬಳಸಬೇಕೆಂದು ಬೇರೆಯವರು ಹೇಳುವುದಕ್ಕಿಂತ ನೀವೇ ನಿರ್ಧರಿಸುವುದು ಸರಿ. ಏಕೆಂದರೆ,ಇದು ನಿಮ್ಮ ಮುಖದ ಅನೇಕ ಗುಣಗಳನ್ನು ಅವಲಂಭಿಸಿದೆ.
ಹೊಸರೀತಿಯ ಸೋಪುಗಳು.
ಇದಕ್ಕಾಗಿಯೇ ಕೆಲವು ಪ್ರತಿಷ್ಟಿತ ಕಂಪನಿಗಳು ಅನೇಕ ತರಹದ ಸೋಪುಗಳನ್ನು ತಯಾರಿಸಿದ್ದಾರೆ. ಇವು, ಸಣ್ಣ ಬಾರ್ ರೂಪದಲ್ಲಿ ಅತಿ ಅಗ್ಗದ ಬೆಲೆಯಲ್ಲಿ ಸಿಗುತ್ತವೆ.
ಅಷ್ಟೇಅಲ್ಲದೆ,ಇವುಗಳು ಅನೇಕಬಣ್ಣ,ಆಕಾರ ಹಾಗು ಪರಿಮಳಗಳಿಂದ ಕೂಡಿರುತ್ತವೆ.
ಉದಾಹರಣೆಗೆ , ಈ ಚಿತ್ರ ನೋಡಿ.ಇದು ನಿಂಬೇಹಣ್ಣಿನ ರಸ ಹಾಗು ಅದರ ಪರಿಮಳ ದಿಂದ ಕೂಡಿದ ಸೋಪು.

  ಇದರಿಂದ ಮುಖ ತೊಳೆಯುವದೆ ಒಂದು ಅನಂದ. ಅದ್ಬುತ ತಾಜಾತನವನ್ನು  ಉಂಟುಮಾಡುತ್ತದೆ. ಬೇಸಿಗೆಕಾಲಕ್ಕೆ  ಹಾಗು ಎಣ್ಣೆ ಮುಖಕ್ಕೆ ಉತ್ತಮ. 

ಇನ್ನೊಂದು ಉದಾಹರಣೆ ನೋಡಿ. ಇದು ಆಲೋವೆರದಿಂದ ಕೂಡಿದ ಸೂಪು.
ಇದು ಅನೇಕ ಚರ್ಮದ ತೊಂದರೆಗಳನ್ನು  ಸರಿಪರಿಸುತ್ತದೆಎಂದು ಹೇಳಲಾಗಿದೆ. ಹೀಗೆಯ ಹೇಳುತ್ತಾ ಹೋದರೆ ಕೊನೆಯಿಲ್ಲ. ಇನ್ನೂ ಕೆಲವು ವಿಶೇಷ ಸೋಪುಗಳು ಇವೆ. ಇವು ಎರಡು ಪದರ ಹೊದಿವೆ. ಈ ಕೆಳಗಿನ ಚಿತ್ರ ನೋಡಿ.
ಇದು ನಿಜವಾಗಿಯೂ ಸೋಪು. ತಿನ್ನುವ ಬರ್ಫಿ ಅಲ್ಲ! ಒಂದೊಂದು ಪದರದಲ್ಲಿ ಒಂದೊಂದು ಗುಣಗಳಿವೆ. ಇಂಥಹ ಕೆಲವು ಸೋಪುಗಳಿಗೆ, ಒಂದುಕಡೆ ಚಿಕ್ಕ ಮರಳಿನಂಥಹ ಕಣಗಳು ಇದ್ದು, ಮುಖ ಉಜ್ಜಿದಾಗ (ಸ್ಕ್ರುಬ್) ಚರ್ಮದ ರಂದ್ರಗಳಲ್ಲಿಯ ಕಷ್ಮಲಗಳನ್ನು ಶುದ್ದಿ ಮಾಡುತ್ತದೆ. 
ನೀವು ಗಮನಿಸಬೇಕಾದ ಹಾಗು ಆಶ್ಚರ್ಯದ ಇನ್ನೊಂದು ಸಂಗತಿ ಎಂದರೆ  :
ಈಗ ನಿಮ್ಮ ಮನಸ್ಸಿನಲ್ಲಿರುವ ಪ್ರಶ್ನೆ " ಈ ಎಲ್ಲ ಸೋಪುಗಳು ಎಲ್ಲಿ ಸಿಗುತ್ತವೆ?" ಎಂಬುದು. 

ಇದು ಎಲ್ಲ ಸೋಪು  ಹಾಗು ಇನ್ನೂ ಅನೇಕ ಇಂಥಹ ವಸ್ತುಗಳು ಸಿಗುವ ಅಂಗಡಿಯನ್ನು ಸುಮಾರು ಎರಡು ತಿಂಗಳ ಹಿಂದೆಯೇ ನನ್ನ ಹೆಂಡತಿ ಪ್ರಾರಂಭಿಸಿದ್ದಾಳೆ. ನಾನು ಬರೆದಿರುವ ಈ ಮೇಲಿನ ಎಲ್ಲಾ ಸಂಗತಿಗಳು ನನ್ನ ಸ್ವಂತ ಅನುಭವದ್ದು! ನಾನು ಸುಮಾರು ನಾಲ್ಕು ತಿಂಗಳಿನಿಂದ ಈ ಸೋಪು ಹಾಗು ಶಾಂಪೂ ಉಪಯೋಗಿಸುತ್ತಿದ್ದೇನೆ.(ಶಾಂಪೂಗಳ ಲೇಖನವನ್ನು ಇನ್ನೊಮ್ಮೆ ಬರೆಯುತ್ತೇನೆ.) ಅಂಗಡಿಯ ಹೆಸರು "ಹರ್ಬೋಟಿಕ್": ವಿಳಾಸ:

n0. 8,2nd cross,Income tax layout, near attiguppe, Bangalore -560040.
Eye world  ಹಾಗು  kanva mart ಗಳ  ನಡುವೆ ಇದೆ.
ಈ ಸೋಪುಗಳನ್ನು ನಮ್ಮ ವೆಬ್ಸೈಟ್ ನಲ್ಲೂ ಕೊಳ್ಳಬಹುದು. ಅದರ ಲಿಂಕ್ :
ಆದರೆ, ಅಂಗಡಿಗೆ ಬಂದು, ಯಾವ ವಸ್ತುಗಳನ್ನು ಹೇಗೆ ಉಪಯೋಗಿಸಬೇಕೆಂದು ತಿಳಿಯುವುದು  ಅಂತ್ಯಂತ ಉಪಯುಕ್ತ. ಸಾಮಾನ್ಯವಾಗಿ, ಸಂಜೆ 6 ರಿಂದ  8 ರವರೆಗೆ ತೆರೆದಿರುತ್ತದೆ. ಮೊಬೈಲ್ :8971862089



ಗುರುವಾರ, ಜೂನ್ 30, 2016

ಕಾಗದದ ದೋಣಿ




ನಾವು ಚಿಕ್ಕ ಮಕ್ಕಳಾಗಿದ್ದಾಗ, ಸಣ್ಣ ಸಣ್ಣ ವಿಷಯಗಳಿಗೆ ಖುಷಿ ಪಡುತ್ತಿದ್ದೆವು. ಜೋರುಮಳೆಗಾಗಿ ಕಾಯುತ್ತಿದ್ದೆವು.ಮಳೆಬಂದು, ರಸ್ತೆಯಲ್ಲಿ ನೀರು ಹರಿಯುವಾಗ ಕಾಗದದ ದೋಣಿ ಮಾಡಿ ಆಡುತ್ತಿದ್ದೆವು. ಆ ಆನಂದವನ್ನು ವಿವರಿಸಲಾಗದು.
ಈಗಲೂ ಮಳೆ ಬರುತ್ತದೆ,ರಸ್ತೆಯಲ್ಲಿ ಇನ್ನೂ ಜಾಸ್ತಿ ನೀರು ಹರುಯುತ್ತದೆ.ಕಾಗದ ಇದೆ. ಆದರೆ ನಮಗೆ ಆಡುವ ಮನಸ್ಸು ಇಲ್ಲ. ನಾವು"ಜವಾಬ್ದಾರಿ" ಯನ್ನು  ಹೊತ್ತುಕೊಂದಿದ್ದೇವೆ.ಸಮಯವೇ ಸಾಲದು ಎನ್ನುತ್ತೇವೆ.ಇರುವ ಸಮಯವನ್ನೆಲ್ಲ ಹಣ ಮಾಡಲು ಉಪಯೋಗಿಸುತ್ತೇವೆ.
ಈಗಲೂ ನಾನು ಕೆಲವು ದೊಡ್ಡವರನ್ನು ನೋಡಿದ್ದೇನೆ. ಅವರು ಮಕ್ಕಳಂತೆ ಅಡಿ ಸಂತೋಷ ಪಡುತ್ತಾರೆ. ಅವರೇ ಬುದ್ದಿವಂತರು. ನಾವೂ ಅವರಂತೆ ಆಗಲು ಕಲಿಯೋಣ.

ಗುರುವಾರ, ಅಕ್ಟೋಬರ್ 1, 2015

ಅಂದವಾದ ಗಿಣಿ ಮತ್ತು ಕುರೂಪಿಕಾಗೆ.

ಸ್ವಚ್ಚಂದದಿಂದ ಹಾರಾಡುತ್ತಿದ್ದ ಕಾಗೆ ನಗರದ ದೊಡ್ಡ ಬಂಗಲೆಯೊಂದನ್ನು ನೋಡಿತು. ಮಹಡಿಯ ಬಾಲ್ಕನಿಯ ಗೋಡೆ ಮೇಲೆ ಕುಳಿತು "ಆಹಾ! ಎಂಥ ಬಂಗಲೆ: ಇದರ ಯಜಮಾನ ಬಹಳ ಸುಖವಾಗಿ ಇರಬಹುದು" ಎಂದುಕೊಂಡು ಪಕ್ಕದಲ್ಲಿದ್ದ ದೊಡ್ಡ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡಿತು. ಹಾಗೆಯೇ, ಅದೇ ಕನ್ನಡಿಯಲ್ಲಿ ಪಂಜರದಲ್ಲಿದ್ದ ಗಿಣಿಯನ್ನು ನೋಡಿತು." ಓ, ನಾನು ಎಂಥ  ಕುರೂಪಿ! ಗಿಣಿಯು ಎಷ್ಟು ಅದವಾಗಿದೆ, ದೇವರು ನನಗೆ ಅನ್ಯಾಯ ಮಾಡಿದ್ದಾನೆ " ಎಂದುಕೊಂಡಿತು.
ಗಿಣಿಯ ಹತ್ತಿರ ಹೋಗಿ ಇದನ್ನೆಲ್ಲಾ ಹೇಳಿ, " ನನ್ನನ್ನು ಮುಂದಿನ ಜನ್ಮದಲ್ಲಿ ಗಿಣಿಯಾಗಿ ಮಾಡು ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೇನೆ" ಎಂದಿತು.
ಅದಕ್ಕೆ ಗಿಣಿ" ನೀನು ಮೂಖ೯, ನಾನು ಸುಂದರವಾಗಿರುವುದರಿಂದ ನನ್ನನ್ನು ಪಂಜರದಲ್ಲಿ ಇಟ್ಟಿದ್ದಾರೆ. ದಿನವೂ ನನ್ನನ್ನು ಬೀದಿ ಬೀದಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ನಾಟ್ಯ ಮಾಡಿಸುತ್ತಾರೆ. ಬಂದ ಹಣವನ್ನು ಯಜಮಾನ ಇಟ್ಟು ಕೊಂಡು , ನನಗೆ ಸ್ವಲ್ಪ ತಿಂಡಿ ಕೊಡುತ್ತಾನೆ. ನೀನು ಕುರೂಪಿಯಾದ್ದರಿಂದ ನಿನ್ನನ್ನು ಯಾರೂ ಹಿಂಸಿಸುವುದಿಲ್ಲ. ಅಂದವಾಗಿದ್ದು , ಪಂಜರದಲ್ಲಿ ಇರುವುದಕ್ಕಿಂತ ಕುರೂಪಿಯಾಗಿದ್ದು ಸ್ವತಂತ್ರವಾಗಿರುವುದೇ ಮೇಲು- ನನ್ನನ್ನು ಮುಂದಿನ ಜನ್ಮದಲ್ಲಿ ಕಾಗೆ ಮಾಡೆಂದು ದೇವರನ್ನು ಬಹುದಿನಗಳಿಂದ ಬೇಡುತ್ತಿದ್ದೇನೆ " ಎಂದಿತು.
ಕಾಗೆ ಸಂತೊಷದಿಂದ ಹಾರಿತು.
ದೇವರು ಬೇರೆಯವರಿಗೆಲ್ಲಾ ಅನೇಕ ಸೌಲಭ್ಯಗಳನ್ನು ಕೊಟ್ಟಿದ್ದಾನೆ - ನಮಗೆ ಮಾತ್ರ ಏನೂ ಕೊಟ್ಟಿಲ್ಲ ಎಂದುಕೊಳ್ಳುತ್ತೇನೆ. ಆದರೆ, ಬೇರೆಯವರ ನಿಜವಾದ ಕಷ್ಟ ನಮಗೆ ತಿಳಿದಿರುವುದಿಲ್ಲ.