ಪುಟಗಳು

ಗುರುವಾರ, ಅಕ್ಟೋಬರ್ 1, 2015

ಅಂದವಾದ ಗಿಣಿ ಮತ್ತು ಕುರೂಪಿಕಾಗೆ.

ಸ್ವಚ್ಚಂದದಿಂದ ಹಾರಾಡುತ್ತಿದ್ದ ಕಾಗೆ ನಗರದ ದೊಡ್ಡ ಬಂಗಲೆಯೊಂದನ್ನು ನೋಡಿತು. ಮಹಡಿಯ ಬಾಲ್ಕನಿಯ ಗೋಡೆ ಮೇಲೆ ಕುಳಿತು "ಆಹಾ! ಎಂಥ ಬಂಗಲೆ: ಇದರ ಯಜಮಾನ ಬಹಳ ಸುಖವಾಗಿ ಇರಬಹುದು" ಎಂದುಕೊಂಡು ಪಕ್ಕದಲ್ಲಿದ್ದ ದೊಡ್ಡ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡಿತು. ಹಾಗೆಯೇ, ಅದೇ ಕನ್ನಡಿಯಲ್ಲಿ ಪಂಜರದಲ್ಲಿದ್ದ ಗಿಣಿಯನ್ನು ನೋಡಿತು." ಓ, ನಾನು ಎಂಥ  ಕುರೂಪಿ! ಗಿಣಿಯು ಎಷ್ಟು ಅದವಾಗಿದೆ, ದೇವರು ನನಗೆ ಅನ್ಯಾಯ ಮಾಡಿದ್ದಾನೆ " ಎಂದುಕೊಂಡಿತು.
ಗಿಣಿಯ ಹತ್ತಿರ ಹೋಗಿ ಇದನ್ನೆಲ್ಲಾ ಹೇಳಿ, " ನನ್ನನ್ನು ಮುಂದಿನ ಜನ್ಮದಲ್ಲಿ ಗಿಣಿಯಾಗಿ ಮಾಡು ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೇನೆ" ಎಂದಿತು.
ಅದಕ್ಕೆ ಗಿಣಿ" ನೀನು ಮೂಖ೯, ನಾನು ಸುಂದರವಾಗಿರುವುದರಿಂದ ನನ್ನನ್ನು ಪಂಜರದಲ್ಲಿ ಇಟ್ಟಿದ್ದಾರೆ. ದಿನವೂ ನನ್ನನ್ನು ಬೀದಿ ಬೀದಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ನಾಟ್ಯ ಮಾಡಿಸುತ್ತಾರೆ. ಬಂದ ಹಣವನ್ನು ಯಜಮಾನ ಇಟ್ಟು ಕೊಂಡು , ನನಗೆ ಸ್ವಲ್ಪ ತಿಂಡಿ ಕೊಡುತ್ತಾನೆ. ನೀನು ಕುರೂಪಿಯಾದ್ದರಿಂದ ನಿನ್ನನ್ನು ಯಾರೂ ಹಿಂಸಿಸುವುದಿಲ್ಲ. ಅಂದವಾಗಿದ್ದು , ಪಂಜರದಲ್ಲಿ ಇರುವುದಕ್ಕಿಂತ ಕುರೂಪಿಯಾಗಿದ್ದು ಸ್ವತಂತ್ರವಾಗಿರುವುದೇ ಮೇಲು- ನನ್ನನ್ನು ಮುಂದಿನ ಜನ್ಮದಲ್ಲಿ ಕಾಗೆ ಮಾಡೆಂದು ದೇವರನ್ನು ಬಹುದಿನಗಳಿಂದ ಬೇಡುತ್ತಿದ್ದೇನೆ " ಎಂದಿತು.
ಕಾಗೆ ಸಂತೊಷದಿಂದ ಹಾರಿತು.
ದೇವರು ಬೇರೆಯವರಿಗೆಲ್ಲಾ ಅನೇಕ ಸೌಲಭ್ಯಗಳನ್ನು ಕೊಟ್ಟಿದ್ದಾನೆ - ನಮಗೆ ಮಾತ್ರ ಏನೂ ಕೊಟ್ಟಿಲ್ಲ ಎಂದುಕೊಳ್ಳುತ್ತೇನೆ. ಆದರೆ, ಬೇರೆಯವರ ನಿಜವಾದ ಕಷ್ಟ ನಮಗೆ ತಿಳಿದಿರುವುದಿಲ್ಲ.