ಪುಟಗಳು

ಗುರುವಾರ, ಜೂನ್ 30, 2016

ಕಾಗದದ ದೋಣಿ




ನಾವು ಚಿಕ್ಕ ಮಕ್ಕಳಾಗಿದ್ದಾಗ, ಸಣ್ಣ ಸಣ್ಣ ವಿಷಯಗಳಿಗೆ ಖುಷಿ ಪಡುತ್ತಿದ್ದೆವು. ಜೋರುಮಳೆಗಾಗಿ ಕಾಯುತ್ತಿದ್ದೆವು.ಮಳೆಬಂದು, ರಸ್ತೆಯಲ್ಲಿ ನೀರು ಹರಿಯುವಾಗ ಕಾಗದದ ದೋಣಿ ಮಾಡಿ ಆಡುತ್ತಿದ್ದೆವು. ಆ ಆನಂದವನ್ನು ವಿವರಿಸಲಾಗದು.
ಈಗಲೂ ಮಳೆ ಬರುತ್ತದೆ,ರಸ್ತೆಯಲ್ಲಿ ಇನ್ನೂ ಜಾಸ್ತಿ ನೀರು ಹರುಯುತ್ತದೆ.ಕಾಗದ ಇದೆ. ಆದರೆ ನಮಗೆ ಆಡುವ ಮನಸ್ಸು ಇಲ್ಲ. ನಾವು"ಜವಾಬ್ದಾರಿ" ಯನ್ನು  ಹೊತ್ತುಕೊಂದಿದ್ದೇವೆ.ಸಮಯವೇ ಸಾಲದು ಎನ್ನುತ್ತೇವೆ.ಇರುವ ಸಮಯವನ್ನೆಲ್ಲ ಹಣ ಮಾಡಲು ಉಪಯೋಗಿಸುತ್ತೇವೆ.
ಈಗಲೂ ನಾನು ಕೆಲವು ದೊಡ್ಡವರನ್ನು ನೋಡಿದ್ದೇನೆ. ಅವರು ಮಕ್ಕಳಂತೆ ಅಡಿ ಸಂತೋಷ ಪಡುತ್ತಾರೆ. ಅವರೇ ಬುದ್ದಿವಂತರು. ನಾವೂ ಅವರಂತೆ ಆಗಲು ಕಲಿಯೋಣ.

ಗುರುವಾರ, ಅಕ್ಟೋಬರ್ 1, 2015

ಅಂದವಾದ ಗಿಣಿ ಮತ್ತು ಕುರೂಪಿಕಾಗೆ.

ಸ್ವಚ್ಚಂದದಿಂದ ಹಾರಾಡುತ್ತಿದ್ದ ಕಾಗೆ ನಗರದ ದೊಡ್ಡ ಬಂಗಲೆಯೊಂದನ್ನು ನೋಡಿತು. ಮಹಡಿಯ ಬಾಲ್ಕನಿಯ ಗೋಡೆ ಮೇಲೆ ಕುಳಿತು "ಆಹಾ! ಎಂಥ ಬಂಗಲೆ: ಇದರ ಯಜಮಾನ ಬಹಳ ಸುಖವಾಗಿ ಇರಬಹುದು" ಎಂದುಕೊಂಡು ಪಕ್ಕದಲ್ಲಿದ್ದ ದೊಡ್ಡ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡಿತು. ಹಾಗೆಯೇ, ಅದೇ ಕನ್ನಡಿಯಲ್ಲಿ ಪಂಜರದಲ್ಲಿದ್ದ ಗಿಣಿಯನ್ನು ನೋಡಿತು." ಓ, ನಾನು ಎಂಥ  ಕುರೂಪಿ! ಗಿಣಿಯು ಎಷ್ಟು ಅದವಾಗಿದೆ, ದೇವರು ನನಗೆ ಅನ್ಯಾಯ ಮಾಡಿದ್ದಾನೆ " ಎಂದುಕೊಂಡಿತು.
ಗಿಣಿಯ ಹತ್ತಿರ ಹೋಗಿ ಇದನ್ನೆಲ್ಲಾ ಹೇಳಿ, " ನನ್ನನ್ನು ಮುಂದಿನ ಜನ್ಮದಲ್ಲಿ ಗಿಣಿಯಾಗಿ ಮಾಡು ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೇನೆ" ಎಂದಿತು.
ಅದಕ್ಕೆ ಗಿಣಿ" ನೀನು ಮೂಖ೯, ನಾನು ಸುಂದರವಾಗಿರುವುದರಿಂದ ನನ್ನನ್ನು ಪಂಜರದಲ್ಲಿ ಇಟ್ಟಿದ್ದಾರೆ. ದಿನವೂ ನನ್ನನ್ನು ಬೀದಿ ಬೀದಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ನಾಟ್ಯ ಮಾಡಿಸುತ್ತಾರೆ. ಬಂದ ಹಣವನ್ನು ಯಜಮಾನ ಇಟ್ಟು ಕೊಂಡು , ನನಗೆ ಸ್ವಲ್ಪ ತಿಂಡಿ ಕೊಡುತ್ತಾನೆ. ನೀನು ಕುರೂಪಿಯಾದ್ದರಿಂದ ನಿನ್ನನ್ನು ಯಾರೂ ಹಿಂಸಿಸುವುದಿಲ್ಲ. ಅಂದವಾಗಿದ್ದು , ಪಂಜರದಲ್ಲಿ ಇರುವುದಕ್ಕಿಂತ ಕುರೂಪಿಯಾಗಿದ್ದು ಸ್ವತಂತ್ರವಾಗಿರುವುದೇ ಮೇಲು- ನನ್ನನ್ನು ಮುಂದಿನ ಜನ್ಮದಲ್ಲಿ ಕಾಗೆ ಮಾಡೆಂದು ದೇವರನ್ನು ಬಹುದಿನಗಳಿಂದ ಬೇಡುತ್ತಿದ್ದೇನೆ " ಎಂದಿತು.
ಕಾಗೆ ಸಂತೊಷದಿಂದ ಹಾರಿತು.
ದೇವರು ಬೇರೆಯವರಿಗೆಲ್ಲಾ ಅನೇಕ ಸೌಲಭ್ಯಗಳನ್ನು ಕೊಟ್ಟಿದ್ದಾನೆ - ನಮಗೆ ಮಾತ್ರ ಏನೂ ಕೊಟ್ಟಿಲ್ಲ ಎಂದುಕೊಳ್ಳುತ್ತೇನೆ. ಆದರೆ, ಬೇರೆಯವರ ನಿಜವಾದ ಕಷ್ಟ ನಮಗೆ ತಿಳಿದಿರುವುದಿಲ್ಲ.

ಶನಿವಾರ, ಜೂನ್ 6, 2015

ದೋಸೆ ಹುಚ್ಚು

ನನಗೆ ಮಸಾಲೆ ದೋಸೆ ಹುಚ್ಚು. ಅನೇಕ ವರ್ಷಗಳ ನಂತರ ನಾನು
ಗಾಂಧೀಬಜಾರ್ ನ ವಿದ್ಯಾಥಿ೯ ಭವನಕ್ಕೆ ನನ್ನ ಕುಟುಂಬ ಸಮೇತ ಹೋಗಿ ಮಸಾಲೆ ದೋಸೆ ತಿಂದು ಬಂದೆ.
ನನ್ನ ಹಳೆಯ ಹವ್ಯಾಸಕ್ಕೆ ಸ್ವಲ್ಡ ಉಪ್ಪು ಖಾರ ಹಾಕಿ ಇಲ್ಲಿ ಬರೆದಿದ್ದೇನೆ.
ನಾನು ಪ್ರಥಮ ದಿಯುಸಿಯಲ್ಲಿ ಓದುತ್ತಿದ್ದಾಗ ಮಸಾಲೆ ದೋಸೆ ತಿನ್ನುವ ಆಸೆ ಅತಿಯಾಯಿತು.
ನಾನು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದೆ - ಅಲ್ಲಿಯೇ ಗಾಂಧೀಬಜಾರ್
ನಲ್ಲಿ ಇರುವ ವಿದ್ಯಾಥಿ೯ ಭವನಕ್ಕೆ ಹೋಗಿ ಒಂದು ದಿನ ಮಸಾಲೆ ದೋಸೆ ತಿಂದೆ.
ಆಹಾ! ಎಂಥಾ ರುಚಿ. ಈ ರುಚಿ ನನ್ನನ್ನು ಮೋಡಿ ಮಾಡಿತು. ನಾನು ಊಟದ ಡಬ್ಬಿಯನ್ನು
ತೆಗೆದುಕೊಂಡು ಹೋಗುವುದನ್ನು ನಿಲ್ಲಿಸಿದೆ.
ಪ್ರತಿ ದಿನ ಕಾಲೇಜಿನ ಊಟದ ಸಮಯದಲ್ಲಿ ವಿದ್ಯಾಥಿ೯ ಭವನಕ್ಕೆ ಹೋಗಿ ಮಸಾಲೆ ದೋಸೆ
ತಿನ್ನುವುದು ನನ್ನ ಹವ್ಯಾಸವಾಯಿತು. ಇದು ಹೀಗೆಯೇ ಮುಂದುವರಿದು ಸುಮಾರು
ಮೂರು ನಾಲ್ಕು ತಿಂಗಳು ಕಳೆಯಿತು.ನಂತರ ನನಗೆ ಸ್ವಲ್ಪ
ಹೊಟ್ಟೆಯ ತೊಂದರೆ ಶುರುವಾಯಿತು:
ಡಾಕ್ಟರರ ಬಳಿ ಹೋಗಿ ತೋರಿಸಿದೆ.ಅವರು ಹೊಟ್ಟಿಯನ್ನು
ಪರೀಕ್ಷಿಸಿ ನೋಡಿದರು.ನಂತರ "ನೀವು ಏನಾದರೂ ಎಣ್ಣಿ ಪದಾಥ೯ ತಿಂದಿರಾ "? ಎಂದು ಕೇಳಿದರು.
ನಾನು ನನ್ನ ದಿನ ನಿತ್ಯದ ಮಸಾಲೆ ದೋಸೆ ವಿಚಾರ ಹೇಳಿದೆ.ತಕ್ಷಣ
ಅವರಿಗೆ ತಲೆ ಸುತ್ತಿದಂತಾಗಿ ಒಂದು ಲೋಟ ನೀರು ಕುಡಿದು , ನಂತರ ಹೇಳಿದರು
"ಇಷ್ಟು ದಿನ ನಿರಂತರವಾಗಿ ಮಸಾಲೆ ದೋಸೆ ತಿಂದ ಮೇಲೂ
ನಿಮಗೆ ಇಷ್ಟು ಸಣ್ಣ ತೊಂದರೆ ಆಗಿದೆ ಅಂದರೆ ಅದು ಯಾವುದೋ ತುಂಬಾ
ಒಳ್ಳೆಹೋಟೆಲು ಇರಬೇಕು. ಅದು ಯಾವ ಹೋಟೆಲು?" ಎಂದು ಕೆಳಿದರು.
ನಾನು " ವಿದ್ಯಾಥಿ೯ ಭವನ "ಎಂದೆ. ಅವರು
"ನಾನೂ ಇವತ್ತೇ ಹೋಗು ತೇನೆ.ಆದರೆ ಒಂದು ಮಾತು :
ದಿನಾಲೂ ಅದನ್ನೇ ತಿನ್ನುವುದು ದೇಹಕ್ಕೆ ಒಳ್ಳೆಯದಲ್ಲ " ಎಂದು ಹೇಳಿದರು.
ಅಂದಿನಿಂದ ನಾನು ತಿನ್ನುವುದನ್ನು ಬಿಡಲಿಲ್ಲ
ಆದರೆ ದಿನಾಲೂ ತಿನ್ನ ವ ಬದಲು, ವಾರಕ್ಕೆ ಒಮ್ಮೆ ತಿನ್ನುವುದಕ್ಕೆ ಶುರು ಮಾಡಿದೆ.