ಪುಟಗಳು

ಶನಿವಾರ, ಜೂನ್ 6, 2015

ದೋಸೆ ಹುಚ್ಚು

ನನಗೆ ಮಸಾಲೆ ದೋಸೆ ಹುಚ್ಚು. ಅನೇಕ ವರ್ಷಗಳ ನಂತರ ನಾನು
ಗಾಂಧೀಬಜಾರ್ ನ ವಿದ್ಯಾಥಿ೯ ಭವನಕ್ಕೆ ನನ್ನ ಕುಟುಂಬ ಸಮೇತ ಹೋಗಿ ಮಸಾಲೆ ದೋಸೆ ತಿಂದು ಬಂದೆ.
ನನ್ನ ಹಳೆಯ ಹವ್ಯಾಸಕ್ಕೆ ಸ್ವಲ್ಡ ಉಪ್ಪು ಖಾರ ಹಾಕಿ ಇಲ್ಲಿ ಬರೆದಿದ್ದೇನೆ.
ನಾನು ಪ್ರಥಮ ದಿಯುಸಿಯಲ್ಲಿ ಓದುತ್ತಿದ್ದಾಗ ಮಸಾಲೆ ದೋಸೆ ತಿನ್ನುವ ಆಸೆ ಅತಿಯಾಯಿತು.
ನಾನು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದೆ - ಅಲ್ಲಿಯೇ ಗಾಂಧೀಬಜಾರ್
ನಲ್ಲಿ ಇರುವ ವಿದ್ಯಾಥಿ೯ ಭವನಕ್ಕೆ ಹೋಗಿ ಒಂದು ದಿನ ಮಸಾಲೆ ದೋಸೆ ತಿಂದೆ.
ಆಹಾ! ಎಂಥಾ ರುಚಿ. ಈ ರುಚಿ ನನ್ನನ್ನು ಮೋಡಿ ಮಾಡಿತು. ನಾನು ಊಟದ ಡಬ್ಬಿಯನ್ನು
ತೆಗೆದುಕೊಂಡು ಹೋಗುವುದನ್ನು ನಿಲ್ಲಿಸಿದೆ.
ಪ್ರತಿ ದಿನ ಕಾಲೇಜಿನ ಊಟದ ಸಮಯದಲ್ಲಿ ವಿದ್ಯಾಥಿ೯ ಭವನಕ್ಕೆ ಹೋಗಿ ಮಸಾಲೆ ದೋಸೆ
ತಿನ್ನುವುದು ನನ್ನ ಹವ್ಯಾಸವಾಯಿತು. ಇದು ಹೀಗೆಯೇ ಮುಂದುವರಿದು ಸುಮಾರು
ಮೂರು ನಾಲ್ಕು ತಿಂಗಳು ಕಳೆಯಿತು.ನಂತರ ನನಗೆ ಸ್ವಲ್ಪ
ಹೊಟ್ಟೆಯ ತೊಂದರೆ ಶುರುವಾಯಿತು:
ಡಾಕ್ಟರರ ಬಳಿ ಹೋಗಿ ತೋರಿಸಿದೆ.ಅವರು ಹೊಟ್ಟಿಯನ್ನು
ಪರೀಕ್ಷಿಸಿ ನೋಡಿದರು.ನಂತರ "ನೀವು ಏನಾದರೂ ಎಣ್ಣಿ ಪದಾಥ೯ ತಿಂದಿರಾ "? ಎಂದು ಕೇಳಿದರು.
ನಾನು ನನ್ನ ದಿನ ನಿತ್ಯದ ಮಸಾಲೆ ದೋಸೆ ವಿಚಾರ ಹೇಳಿದೆ.ತಕ್ಷಣ
ಅವರಿಗೆ ತಲೆ ಸುತ್ತಿದಂತಾಗಿ ಒಂದು ಲೋಟ ನೀರು ಕುಡಿದು , ನಂತರ ಹೇಳಿದರು
"ಇಷ್ಟು ದಿನ ನಿರಂತರವಾಗಿ ಮಸಾಲೆ ದೋಸೆ ತಿಂದ ಮೇಲೂ
ನಿಮಗೆ ಇಷ್ಟು ಸಣ್ಣ ತೊಂದರೆ ಆಗಿದೆ ಅಂದರೆ ಅದು ಯಾವುದೋ ತುಂಬಾ
ಒಳ್ಳೆಹೋಟೆಲು ಇರಬೇಕು. ಅದು ಯಾವ ಹೋಟೆಲು?" ಎಂದು ಕೆಳಿದರು.
ನಾನು " ವಿದ್ಯಾಥಿ೯ ಭವನ "ಎಂದೆ. ಅವರು
"ನಾನೂ ಇವತ್ತೇ ಹೋಗು ತೇನೆ.ಆದರೆ ಒಂದು ಮಾತು :
ದಿನಾಲೂ ಅದನ್ನೇ ತಿನ್ನುವುದು ದೇಹಕ್ಕೆ ಒಳ್ಳೆಯದಲ್ಲ " ಎಂದು ಹೇಳಿದರು.
ಅಂದಿನಿಂದ ನಾನು ತಿನ್ನುವುದನ್ನು ಬಿಡಲಿಲ್ಲ
ಆದರೆ ದಿನಾಲೂ ತಿನ್ನ ವ ಬದಲು, ವಾರಕ್ಕೆ ಒಮ್ಮೆ ತಿನ್ನುವುದಕ್ಕೆ ಶುರು ಮಾಡಿದೆ.

ಶನಿವಾರ, ಜೂನ್ 7, 2014

ಎಲ್ಲರಿಗೂ ಸಂಕ್ರಾಂತಿ ಶುಭಾಷಯಗಳು.

ನನ್ನ ಬ್ಲಾಗ್ ಗೆ ಸ್ವಾಗತ. 


ಈ ಬ್ಲಾಗ್ ನಲ್ಲಿ   ಮುಖ ಪುಟ ವನ್ನು ಬಿಟ್ಟು ,ನಾಲ್ಕು ಮುಖ್ಯ ಪುಟಗಳಿವೆ. 

 ೧] ನನ್ನ ಅನಿಸಿಕೆಗಳು:

 ಪ್ರತಿಯೊಬ್ಬ ಮನುಷ್ಯನಿಗೂ, ತನ್ನದೇ ಆದ ಅನಿಸಿಕೆಗಲಿರುತ್ತವೆ. ಇದು ಒಬ್ಬನೇ ವ್ಯಕ್ತಿಗೆ ಕಾಲ ಕಾಲಕ್ಕೆ ವ್ಯತ್ಯಾಸವಾಗಲೋಬಹುದು. ಶಿಕ್ಷಣ ಹಾಗು ಅನೇಕ ವಿಷಯಗಳ ಬಗ್ಗೆ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತೇನೆ. 

ಇದು ಅನಿಸಿಕೆಗಳೇ ಹೊರತು,ತೀರ್ಪುಗಳಲ್ಲ. 


೨]ಹಾಸ್ಯ ಸನ್ನಿವೇಶಗಳು 

ಇದರಲ್ಲಿ, ನಾನ್ನ  ಜೀವನದ ಹಾಗು ಇತರ ಹಾಸ್ಯಮಯ ಸನ್ನಿವೇಶಗಳನ್ನು ಬರೆಯುತ್ತೇನೆ.  

೩] ನಾನು ಮೋಸಹೊಗಿದ್ದು 

ಇತರರು ಇದೇರೀತಿ ಮೂಸಹೊಗಬಾರದೆಂದು , ನಾನು ಮೂಸಹೋದ ಘಟನೆಗಳನ್ನು ಹಾಸ್ಯಮಯವಾಗಿ ಬರಯುತ್ತೇನೆ 

೪] ಮನಸಿನ ಮಾತುಗಳು 

ಇದರಲ್ಲಿ,  ನಾನೇ ರಚಿಸಿದ ಚುಟುಕಗಳು,ಕವನಗಳು,ಉಕ್ತಿಗಳು,ವಿದ್ಯಾರ್ಥಿಗಳಿಗೆ ಹಿತವಚನಗಳು ಇನ್ನೂ ಮುಂತಾದವು ಇರುತ್ತವೆ. 

ಓದಿ ಆನಂದಿಸಿ, ಇತರರಿಗೂ ತಿಳಿಸಿ. 

ನಿಮ್ಮ ಟೀಕೆ,ಟಿಪ್ಪಣಿ, ಸಲಹೆಗಳಿಗೆ ಸ್ವಾಗತ. 

ಧನ್ಯವಾದಗಳು